CIBIL Score ಕಡಿಮೆ ಇದ್ಯಾ? ಸಾಲ ಸಿಗೋದು ಕಷ್ಟ ಆಗ್ತಾ ಇದೆಯಾ? ಹೇಗೆ CIBIL ಸ್ಕೋರ್ ಜಾಸ್ತಿ ಮಾಡೋದು ನೋಡಿ !

cibil-score-tips-you-must-know

CIBIL Score : ಪ್ರತಿ ಮನೆಯಲ್ಲೂ ಒಂದೊಂದು ಕನಸು ಇರುತ್ತದೆ…ಒಂದಾದರೂ ದಿನ ನನ್ನದೇ ಒಂದು ಸ್ವಂತ ಮನೆ ಇರಬೇಕು.ಹೊಸ ಕಾರು ತೆಗಿದು ಅಮ್ಮ-ಅಪ್ಪನನ್ನು ಮೊದಲ ದಿನ Drive ಗೆ ಕರೆದೊಯ್ಯಬೇಕು.ಮಗಳ ಮದುವೆ ಚೆನ್ನಾಗಿ, ಗೌರವದಿಂದ ಮಾಡಬೇಕು.ಈ ಕನಸುಗಳು ಸಂಪತ್ತುಗಿಂತ ಮನದ ಬೆಲೆ ಹೆಚ್ಚು.ಆದ್ರೆ ಇಂತಹ ಕನಸುಗಳನ್ನ ನಿಜ ಮಾಡಿಕೊಳ್ಳೋದಕ್ಕೆ ಬಹುತೇಕ ಜನರಿಗೆ ಸಾಲ (Loan) ಅವಶ್ಯ.ಹಾಗಾದ್ರೆ ನೀವು ಬ್ಯಾಂಕ್‌ಗೆ ಹೋಗುತ್ತೀರಿ.ಅವರು ನಿಮಗೆ ಮೊದಲಿಗೆ ಕೇಳುವದು ಒಂದೇ:“ನಿಮ್ಮ CIBIL Score ಎಷ್ಟು?”

CIBIL Score ಅಂದ್ರೆ ಏನು?

CIBIL Score = ನಿಮ್ಮ ಹಣಕಾಸಿನ ಶಿಸ್ತಿನ (Financial Discipline) ರಿಪೋರ್ಟ್ ಕಾರ್ಡ್.

  • ಹಿಂದೆ ತೆಗೆದುಕೊಂಡ ಸಾಲವನ್ನು ಹೇಗೆ ಕಟ್ಟಿದ್ದೀರಿ
  • EMI ಸಮಯಕ್ಕೆ ಕಟ್ಟಿದ್ದೀರಾ ಇಲ್ಲವಾ
  • ಕ್ರೆಡಿಟ್ ಕಾರ್ಡ್ ಬಳಸೋದು ನಿಯಂತ್ರಣದಲ್ಲಿದೆಯಾ ಅಥವಾ “ಎಲ್ಲಾ ಸ್ವೈಪ್!” ಅಂತಾ
  • ಅವಧಿ ಮೀರಿದ ಬಿಲ್‌ಗಳು ಇದೆಯಾ ಇಲ್ಲವಾ ಅಂತ ತಿಳಿದುಕೊಳ್ಳಲು ಬಳಸಲಾಗುತ್ತೆ.

ಇವೆಲ್ಲಾ data ಸೇರಿ ಕೊನೆಯಲ್ಲಿ 300 ರಿಂದ 900 ರೊಳಗಿನ ಒಂದು ಸ್ಕೋರ್ ಬರುತ್ತದೆ.ಈ ಕೆಳಗಿನ ಸ್ಕೋರ್ ನಿಮ್ಮಗೆ ಸಾಲ ಪಡೆಯಲು ತುಂಬ ಅಗತ್ಯ.

ScoreWhat it MeansResult
750+ಅತ್ಯುತ್ತಮಸಾಲ ಸುಲಭ + ಬಡ್ಡಿ ಕಡಿಮೆ
650 – 749ಸಾಧಾರಣಸಾಲ ಸಿಗಬಹುದು, ಆದರೆ ಬಡ್ಡಿ ಹೆಚ್ಚು
650 ಕೆಳಗೆನಜೂಕುಸಾಲ ತಿರಸ್ಕಾರ ಸಾಧ್ಯತೆ ಹೆಚ್ಚು

ಆದ್ರೆ ಸತ್ಯ ಹೇಳಬೇಕಾದ್ರೆ

ಸ್ಕೋರ್ ಕಡಿಮೆ ಇದ್ದರೂ ಇದು ಕೊನೆ ಅಲ್ಲ. ಇದ್ದನ್ನು 3 ರಿಂದ 6 ತಿಂಗಳಲ್ಲಿ ಸುಧಾರಿಸಬಹುದು
ಮತ್ತು ಅದು ತುಂಬಾ ಸುಲಭ! ಚೆನ್ನಾಗಿ Follow ಮಾಡ್ಬೇಕಾದ್ದು ಎರಡು ಗೋಲ್ಡನ್ ರೂಲ್‌ಗಳು

Also Read

1) EMI ಮತ್ತು Credit Card Bills → ಸಮಯಕ್ಕೆ ಪಾವತಿಸಿ (ಡಿಲೇ ಬೇಡ)

ನಿಮ್ಮ ಸ್ಕೋರ್‌ನ 35% Weightage ಇದಕ್ಕೇ! ಒಂದು EMI ಲೇಟ್ ಆಯ್ತಾದರೂ → Score ತಕ್ಷಣ ಕೆಳಗೆ ಬರುತ್ತೆ.ಇದರಿಂದ ಮುಂದಿನ ದಿನಗಲ್ಲಿ ನಿಮ್ಮಗೆ ತುಂಬ ತೊಂದರೆ ಆಗುವ ಸಾಧ್ಯತೆ ಇದೆ .ಆದ್ರೆ ಬೇಗ ಲೋನ್ ಸಿಗೋದಿಲ್ಲ ಹಾಗೆ ಆಗುತ್ತೆ.

ಪರಿಹಾರ ಏನು?

Auto-Debit / Auto-Pay Activate ಮಾಡಿ.ಹೀಗಾದ್ರೆ ನೀವು ಮರೆತರೂ ಪಾವತಿ ಸಮಯಕ್ಕೆ ಆಗುತ್ತದೆ.“ಸಮಯಕ್ಕೆ ಪಾವತಿ = ಸ್ಕೋರ್ ಏರಿಕೆ” ಇದು ಸ್ಕೋರ್ ಸುಧಾರಣೆಯ ಮೊದಲ & ಶಕ್ತಿಶಾಲಿ ನಿಯಮ.

2) ಕ್ರೆಡಿಟ್ ಕಾರ್ಡ್ ಬಳಕೆ → 30% ಒಳಗೆ ಇಡಿ

ನಿಮ್ಮ ಕಾರ್ಡ್ ಲಿಮಿಟ್ ₹1,00,000 ಅಂದ್ರೆ →ತಿಂಗಳ ಖರ್ಚು ₹30,000 ಒಳಗೆ! 30% ಮೀರಿದ್ರೆ → ಬ್ಯಾಂಕ್‌ಗಳಿಗೆ ಅನಿಸುತ್ತದೆ. ಇವರು ಸಾಲದ ಮೇಲೆ ಜಾಸ್ತಿ ಅವಲಂಬನೆ ಮಾಡ್ತಾನೆ. ಆಗ ಸ್ಕೋರ್ ಕೆಳಗೆ ಬೀಳುತ್ತದೆ.

Also Read

ಪರಿಹಾರ:

  • ಖರ್ಚು ನಿಯಂತ್ರಿಸಿ
  • ಅನಿವಾರ್ಯವಾಗಿ ಖರ್ಚು ಜಾಸ್ತಿ ಇದ್ದರೆ – Credit Limit Increase Request ಮಾಡಿ

ಲಿಮಿಟ್ ಹೆಚ್ಚಿದರೆ ಬಳಕೆ ಶೇಗಡಾ ಕಡಿಮೆಯಾಗುತ್ತೆ → ಸ್ಕೋರ್ ತನ್ನಂತೇ ಏರುತ್ತೆ

ಸಾರಾಂಶ

ಮಾಡಬೇಕಾದದ್ದುಯಾಕೆಫಲಿತಾಂಶ
Auto-Debit ಮೂಲಕ EMI/ಬಿಲ್ ಸಮಯಕ್ಕೆ ಪಾವತಿಲೇಟ್ ಚಾನ್ಸ್ Zeroಸ್ಕೋರ್ ವೇಗವಾಗಿ ಏರಿಕೆ
Card ಬಳಕೆ 30% ಒಳಗೆಬ್ಯಾಂಕ್‌ನಲ್ಲಿ ನಂಬಿಕೆ ಹೆಚ್ಚುತ್ತದೆಸಾಲ ಸುಲಭ + ಬಡ್ಡಿ ಕಡಿಮೆ

ಇಂದೇ ಈ ಎರಡು ರೂಲ್ Follow ಮಾಡಿದ್ರೆ 3-6 ತಿಂಗಳಲ್ಲಿ ಸ್ಕೋರ್ 700+ ಆಗುತ್ತೆ ಮನೆ / ಕಾರು / ಮದುವೆ ಸಾಲ ಪ್ರಶ್ನೆಯೇ ಇಲ್ಲಕನಸು ನನಸು ಆಗುತ್ತೆ.

- NEXT POST -

PUC ಅಂಕಪಟ್ಟಿ ಬೇಕೆ? ಕಾಲೇಜಿಗೆ ಅಲೆಯುವ ಕೆಲಸ ಇಲ್ಲ! ನಿಮ್ಮ ಮೊಬೈಲ್‌ನಲ್ಲೇ ಪಡೆಯಿರಿ

karnataka-2nd-puc-marks-card-download-2026

ಬೆಂಗಳೂರು: ಕರ್ನಾಟಕದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇದು ನಿಜಕ್ಕೂ ಸಿಹಿ ಸುದ್ದಿ! 2026ರ ಸಾಲಿನ ಪರೀಕ್ಷೆಯ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಇದೀಗ ನಿಮ್ಮ ಅಧಿಕೃತ ಅಂಕಪಟ್ಟಿ (Marks Card) ಪಡೆಯಲು ನೀವು ಕಾಲೇಜಿನ ಮೆಟ್ಟಿಲು ಹತ್ತುವ ಅಗತ್ಯವಿಲ್ಲ. ನಿಮ್ಮ ಜೇಬಿನಲ್ಲಿರುವ ಸ್ಮಾರ್ಟ್‌ಫೋನ್ ಬಳಸಿಯೇ ಕೆಲವೇ ನಿಮಿಷಗಳಲ್ಲಿ ಡಿಜಿಟಲ್ ಅಂಕಪಟ್ಟಿಯನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಹೌದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಈ ಬಾರಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ‘ಡಿಜಿಲಾಕರ್’ (DigiLocker) ಪ್ಲಾಟ್‌ಫಾರ್ಮ್‌ನಲ್ಲಿ ಅಂಕಪಟ್ಟಿಗಳನ್ನು ಲಭ್ಯವಾಗಿಸಿದೆ. ಇದು ಕೇವಲ ಫೋಟೋ ಅಲ್ಲ, ಇದು ಎಲ್ಲಾ ಉನ್ನತ ಶಿಕ್ಷಣ ದಾಖಲಾತಿಗಳಿಗೆ ಮಾನ್ಯತೆ ಹೊಂದಿರುವ ಅಧಿಕೃತ ದಾಖಲೆಯಾಗಿದೆ!

ಈ ತಪ್ಪನ್ನು ಮಾಡಬೇಡಿ! (ಗಮನಿಸಿ)

ಅಂಕಪಟ್ಟಿ ಡೌನ್‌ಲೋಡ್ ಮಾಡುವ ಮುನ್ನ ನೆನಪಿರಲಿ: ನೀವು ಲಾಗಿನ್ ಆಗುವಾಗ ವಿದ್ಯಾರ್ಥಿಯ ಆಧಾರ್ ಸಂಖ್ಯೆಯನ್ನೇ ಬಳಸಬೇಕು. ನಿಮ್ಮ ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್ ಬಳಸಿದರೆ ನಿಮ್ಮ ಅಂಕಪಟ್ಟಿ ಕಾಣಿಸುವುದಿಲ್ಲ.

ಡಿಜಿಲಾಕರ್ ಮೂಲಕ ಅಂಕಪಟ್ಟಿ ಪಡೆಯುವುದು ಹೇಗೆ? (Step-by-Step)

ನಿಮ್ಮ ಫೋನ್‌ನಲ್ಲಿ ಕೆಳಗಿನ 4 ಸುಲಭ ಹಂತಗಳನ್ನು ಅನುಸರಿಸಿ:

  • ಹಂತ 1: ಆಪ್ ಇನ್‌ಸ್ಟಾಲ್ ಮಾಡಿ ಮೊದಲಿಗೆ ಗೂಗಲ್ ಪ್ಲೇ ಸ್ಟೋರ್‌ನಿಂದ ಸರ್ಕಾರದ ಅಧಿಕೃತ ‘DigiLocker‘ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ.
  • ಹಂತ 2: ಲಾಗಿನ್ ಪ್ರಕ್ರಿಯೆ ಅಪ್ಲಿಕೇಶನ್ ಓಪನ್ ಮಾಡಿ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ದಾಖಲಿಸಿ ಲಾಗಿನ್ ಆಗಿ.
  • ಹಂತ 3: ಶಿಕ್ಷಣ ಮಂಡಳಿ ಹುಡುಕಿ ಹೋಮ್ ಪೇಜ್‌ನಲ್ಲಿರುವ ‘Search’ ಬಟನ್ ಕ್ಲಿಕ್ ಮಾಡಿ “Karnataka School Examination and Assessment Board” ಎಂದು ಟೈಪ್ ಮಾಡಿ. ಅಲ್ಲಿ ‘Class 12 / 2nd PUC Marks Card’ ಆಯ್ಕೆ ಕಾಣಿಸುತ್ತದೆ.
  • ಹಂತ 4: ಮಾಹಿತಿ ನಮೂದಿಸಿ ಈಗ ನಿಮ್ಮ ನೋಂದಣಿ ಸಂಖ್ಯೆ (Register Number) ಟೈಪ್ ಮಾಡಿ ಮತ್ತು ವರ್ಷವನ್ನು ‘2026’ ಎಂದು ಆಯ್ಕೆ ಮಾಡಿ. ‘Get Document’ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಅಂಕಪಟ್ಟಿ ಸ್ಕ್ರೀನ್ ಮೇಲೆ ಗೋಚರಿಸುತ್ತದೆ!

ಬೇಕಾಗುವ ದಾಖಲೆಗಳು:

  1. ವಿದ್ಯಾರ್ಥಿಯ ಆಧಾರ್ ಕಾರ್ಡ್.
  2. ಪಿಯುಸಿ ಪರೀಕ್ಷೆಯ ಹಾಲ್ ಟಿಕೆಟ್ (ನೋಂದಣಿ ಸಂಖ್ಯೆಗಾಗಿ).
  3. ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ (OTP ಪಡೆಯಲು).

ಯಾಕೆ ಈ ಡಿಜಿಟಲ್ ಅಂಕಪಟ್ಟಿ ಶ್ರೇಷ್ಠ?

  • ತ್ವರಿತ ಲಭ್ಯತೆ: ಕಾಲೇಜಿಗೆ ಅಂಕಪಟ್ಟಿ ಬರಲು ವಾರಗಳೇ ಬೇಕು, ಆದರೆ ಇಲ್ಲಿ ತಕ್ಷಣ ಸಿಗುತ್ತದೆ.
  • ಸುರಕ್ಷಿತ: ನಿಮ್ಮ ಅಂಕಪಟ್ಟಿ ಎಂದಿಗೂ ಕಳೆದುಹೋಗುವುದಿಲ್ಲ, ಡಿಜಿಟಲ್ ರೂಪದಲ್ಲಿ ಶಾಶ್ವತವಾಗಿ ನಿಮ್ಮ ಆಪ್‌ನಲ್ಲಿರುತ್ತದೆ.
  • ಮಾನ್ಯತೆ: ಡಿಗ್ರಿ ದಾಖಲಾತಿ, ಇಂಜಿನಿಯರಿಂಗ್ ಅಥವಾ ಮೆಡಿಕಲ್ ಕೌನ್ಸೆಲಿಂಗ್‌ಗೆ ಇದನ್ನು ನೇರವಾಗಿ ಬಳಸಬಹುದು.

ಸಮಯ ಉಳಿಸಿ, ಡಿಜಿಟಲ್ ಆಗಿ ಮುನ್ನುಗ್ಗಿ! ಈಗಲೇ ನಿಮ್ಮ ಮೊಬೈಲ್ ಚೆಕ್ ಮಾಡಿ.

- NEXT POST -

Loading more posts...