ಜಾತಿಗಣತಿಗೆ ರಾಜ್ಯಾದ್ಯಂತ ಶಿಕ್ಷಕರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆದರೆ, ಕೆಲ ತಾಂತ್ರಿಕ ತೊಂದರೆಗಳಿಂದಾಗಿ ಪ್ರಕ್ರಿಯೆ ನಿಧಾನಗೊಂಡಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ. ಆದ್ದರಿಂದ ಸಮಯಮಿತಿಯೊಳಗೆ ಸಮೀಕ್ಷೆ ಪೂರ್ಣಗೊಳಿಸಲು, ಈಗ ಸ್ವಯಂ ಸಮೀಕ್ಷೆ (Mobile Self Survey) ಅವಕಾಶ ನೀಡಲಾಗಿದೆ.ಪ್ರತಿಯೊಬ್ಬರು ಮಾಡಿಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ.
ಸಮೀಕ್ಷೆಗೆ ಅಗತ್ಯ ದಾಖಲೆಗಳು
ಸ್ವಯಂ ಸಮೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಈ ಕೆಳಗಿನ ದಾಖಲೆಗಳು ಅಗತ್ಯ:
- ಆಧಾರ್ ಕಾರ್ಡ್ (Aadhaar Card)
- ರೇಷನ್ ಕಾರ್ಡ್ (Ration Card)
- ಮನೆಯ ಎಲ್ಲಾ ಸದಸ್ಯರ ಆಧಾರ್ ವಿವರಗಳು
- ಮೊಬೈಲ್ ನಂಬರ್ (OTP ಪಡೆಯಲು)
- UHID ನಂಬರ್ (ಮನೆಗೆ ಅಂಟಿಸಿದ ಪೇಪರ್ನಲ್ಲಿ ನೀಡಿರುವುದು)
ಕೊನೆಯ ದಿನಾಂಕ: October 07, 2025
ಮೊಬೈಲ್ನಲ್ಲಿ ಸಮೀಕ್ಷೆ ಮಾಡುವ ವಿಧಾನ (Step-by-Step Guide)
- ಮೊದಲು ಅಧಿಕೃತ ಜಾಲತಾಣಕ್ಕೆ ಹೋಗಿ kscbcselfdeclaration.karnataka.gov.in
- ಮುಖಪುಟದಲ್ಲಿ Choose Login ಅಡಿಯಲ್ಲಿ ಎರಡು ಆಯ್ಕೆಗಳು ಕಾಣಿಸುತ್ತವೆ:
- Enumerator / ಸಮೀಕ್ಷೆದಾರ
- Citizen / ನಾಗರಿಕ
ಇಲ್ಲಿ Citizen / ನಾಗರಿಕ ಆಯ್ಕೆಮಾಡಿ.
- ನಿಮ್ಮ 10 ಅಂಕೆಯ ಮೊಬೈಲ್ ನಂಬರ್ ನಮೂದಿಸಿ → OTP ನಮೂದಿಸಿ.
- ತೆರೆಯುವ ಫಾರಂನಲ್ಲಿ UHID ನಂಬರ್ + ಆಧಾರ್ / ರೇಷನ್ ಕಾರ್ಡ್ ವಿವರಗಳು ನಮೂದಿಸಿ.
- ಮನೆಯ ಎಲ್ಲಾ ಸದಸ್ಯರ ಮಾಹಿತಿ ಸರಿಯಾಗಿ ನಮೂದಿಸಿ.
- ಕೊನೆಯಲ್ಲಿ Submit ಕ್ಲಿಕ್ ಮಾಡಿ → ನಿಮ್ಮ ಸ್ವಯಂ ಸಮೀಕ್ಷೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.
ಪ್ರಮುಖ ಸೂಚನೆಗಳು
- ಮಾಹಿತಿಯನ್ನು ನಮೂದಿಸುವ ಮೊದಲು ಸರಿಯಾಗಿ ಪರಿಶೀಲಿಸಿ.
- ತಪ್ಪು ಮಾಹಿತಿ ನೀಡಿದರೆ ಭವಿಷ್ಯದಲ್ಲಿ ತೊಂದರೆ ಎದುರಾಗಬಹುದು.
- ಸಮಯಮಿತಿಯೊಳಗೆ (07 ಅಕ್ಟೋಬರ್ 2025) ಸಮೀಕ್ಷೆ ಪೂರ್ಣಗೊಳಿಸಬೇಕು.
- ಸಮೀಕ್ಷೆ ಮಾಡದಿದ್ದಲ್ಲಿ, ಸಮೀಕ್ಷಾಧಿಕಾರಿ ಮನೆಗೆ ಬಂದು ಮಾಹಿತಿ ದಾಖಲಿಸುವರು.
| Direct Link for Self Survey | Clik here |
ಜಾತಿಗಣತಿ 2025ರಲ್ಲಿ ಎಲ್ಲಾ ಭಾಗವಹಿಸಿ ತಪ್ಪದೆ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದ.
Mahesh is the founder and editor of Vidyamana.com, a Kannada website dedicated to news, technology updates, and cultural content. With 5 years of experience in digital journalism, he is passionate about providing accurate, engaging, and useful information to his readers.
Mahesh believes in making knowledge accessible to everyone and enjoys exploring new topics, sharing insights, and connecting with the community. His work focuses on regional news, technology trends, and cultural stories that matter to Kannada-speaking audiences.
When not writing or editing, Mahesh enjoys reading, learning about new digital tools, and engaging with his readers to better understand their interests and needs.
Connect with Mahesh
Email: [email protected]
Twitter: @MaheshVidyamana
